ಹೊಗಲೇಬೆಕಾದ ತುರ್ತು ಅನಿವಾರ್ಯ
ಒತ್ತಡ ನಿರೀಕ್ಷೆಯ ನಂತರ
ತುಂಬಿಕೊಂಡು ಬಂದ ಬಸ್ಸನ್ನು ತರಾತುರಿಯಿಂದೆರುವ
ತವಕದ ಗಡಿಬಿಡಿಯ ಜನಸಂಮರ್ದದಲ್ಲೂ
ಒತ್ತಾಯದಿಂದ ನೂಕುತ್ತಲೇ ಏರಿದ
ನನ್ನೊಂದಿಗಿನ ಸಹ ಪ್ರಯಾಣಿಕ
ಆಯುಷ್ಯದಲ್ಲಿನ ಒಂದಷ್ಟು ಹೊತ್ತು
ದಟ್ಟಣೆಯ ಪ್ರಯಾಣ ಪ್ರಯಾಸದಲ್ಲೂ
ಬೆವರಿ ಬಸವಳಿದ ನನಗೆ ಚಾಕಲೆತೊಂದನ್ನು
ಕೊಟ್ಟು ಮುಖದಲ್ಲಿ ನಗೆ ಚಿಮ್ಮಿಸಿ
ಆಯಾಸ ಮರೆಸಿ ಉತ್ಸಾಹ ಬರಿಸಿ
ಬಸ್ಸಿಳಿದು ಟಾಟಾ ಹೇಳಿ ಹೋದದ್ದನ್ನು
ಮರುದಿನ ಟೀ ಸಮಯದಲ್ಲಿ ನೆನಪಿಸುತ್ತಾ
ದಿನಪತ್ರಿಕೆ ಪುಟ ತಿರುವಿದಾಗ
ಅಚ್ಚಾದ ನಿನ್ನ ನಗುಮೊಗ ಕಂಡಿತಷ್ಟೇ !
ಆಘಾತಕರ ಸುದ್ದಿ
ಆಕಸ್ಮಿಕ ಮರಣದಿಂದ ಉಂಟಾದ
ಅಗಲಿಕೆಯ ನೋವು ಭರಿಸುವ ಶಕ್ತಿ
ಪರಮಾತ್ಮ ನೀಡಲಿ !
ನನ್ನೊಂದಿಗಿನ ಅಲ್ಪ ಸಮಯ
ಪ್ರಯಾಣದ ನೆನಪೇ ಮನದಾಳದಿ ಅಚ್ಚೋತ್ತಿರುವಾಗ
ಇನ್ನು ಹೆತ್ತವರ ಒಡಹುಟ್ಟಿದವರ
ನೆನಪಿನಳಲು ಎಷ್ಟಿರಬೇಡ ?ಸವೀ ! ನೀನೆಷ್ಟು ಕ್ರೂರಿ ನಿಷ್ಕರುಣಿ ?
ನಿನ್ನ ಟಾಟಾ ಹೇಳಿಕೆಯ ನಗುಮೊಗವನ್ನೇ
ಬಾಳೆಲ್ಲ ನಾನು ನೆನಪಿಸುವಂತೆ ಮಾಡಿದ
ಸಾವೇ ನೀನೆಷ್ಟು ಕ್ರೂರಿ ? ನಿಷ್ಕರುಣಿ ?
Friday, June 12, 2009
Thursday, June 11, 2009
ಆಸರಿಗೆ ಕುಡಿದ್ಯನ ?
ನಮ್ಮನೆಲ್ಲಿ ಇವತ್ತು ದೋಸೆ ಮಾಡಿದ್ದ ಗೊತ್ತಿದ್ದ ? ಅದರ ಜೊತೆ ಮಾವಿನಹಣ್ಣಿನ ಪಾಯಸ ................ಎಷ್ಟೆಲ್ಲ ತಿಂದೆ ನಾನು ಅಂದ್ರೆ ಇವತ್ತು ಪರೀಕ್ಷೆ ಬರಿತ್ನಿಲ್ಲೇ ಅನ್ಸ್ತು .............ಪ್ಲೀಸ್ ಕಾಪಿ ಮಾಡಲೇ ಹೆಲ್ಪ್ ಮಾಡು ..............ಟಾಟಾ
ನಮ್ಮನೆ ಬೆಕ್ಕು
ಚಿನ್ನು
ನಿಂಗೆ ನಾನು ಯಾವಾಗಲು ಹೇಳ್ತಾ ಇರ್ತಿ ಗೊತ್ತಿದ್ದ ನಮ್ಮನೆ ಬೆಕ್ಕು ಚಿನ್ನು ಹೇಳಿ ಅದು ಇವತ್ತು ಯಾವ್ದೋ ಬೆಕ್ಕಿನ ಜೊತೆ ಜಗಳ ಮಾಡಿಕ್ಯಂದು ಬಂಜು ಗೊತ್ತಿದ್ದ..ನಿನ್ ಹಂಗೆ ಇದ್ದು ಅದು...ಅದ್ಕೆ ನಂಗೆ ಚಿನ್ನು ಅಂದ್ರೆ ಇಷ್ಟ .......ಅದ್ಕೆ ನಾನು ನಿಂಗೆ ಚಿನ್ನು ಹೇಳಿ ಕರಯದು ಗೊತ್ತಾತ ?

Wednesday, June 10, 2009
Subscribe to:
Posts (Atom)